SANGEETA – Music

ಸಂಗೀತ   – SANGEETA [Music]

ಎಲ್ಲಾ ಸಂಗೀತ ಪ್ರಿಯರಿಗೆ,  “ಸಂಗೀತ ನಾವಿಕ ೨೦೧೫”  ಕ್ಯಾರೋಲೈನ ಕನ್ನಡ ಬಂಧುಗಳಿಂದ  ಆತ್ಮೀಯ ಸುಸ್ವಾಗತ . ನಮ್ಮ “ಸಂಗೀತ ನಾವಿಕ- ಕ್ಯಾರೋಲೈನ”,  ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದೆ.  ವಿವಿಧತೆಯಲ್ಲಿ ಏಕತೆ ಅನ್ನೊಹಾಗೆ, ವಿವಿಧ  ಶ್ರೇಣಿಯ ಸಂಗೀತವನ್ನು ಪ್ರಸ್ತುತ ಪಡಿಸುವ ಕಲಾವಂತರನ್ನು ವಿಶ್ವದೆಲ್ಲೆಡೆಯಿಂದ ಹಾಗೂ  ನಮ್ಮ ಕರ್ನಾಟಕ ಮತ್ತು ಅಮೇರಿಕದಿಂದ ಕರೆಸಿಕೊಳ್ಳುವ ಅಭಿಲಾಷೆ. ಈ ಮೂರು ದಿನದ ಸಂಗೀತದೌತಣದಲ್ಲಿ ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಸಂಗೀತ ಕಚೇರಿಗಳು,  ಭಕ್ತಿ ಆರಾಧನೆ, ಭಾವಸಂಗಮ, ಚಿತ್ರಗೀತೆಗಳ ಗಾನ ಮಂಜರಿಗಳು, ಸಂಗೀತ ಕಲಾಭಿಮಾನಿಗಳಿಗೆ ಹಮ್ಮಿಕೊಂಡಿರುವ ಕೆಲವು ಮುಖ್ಯ ಕಾರ್ಯಕ್ರಮಗಳು.
ಇದಲ್ಲದೆ ನಮ್ಮ ಕನ್ನಡದ ಅನೇಕ ಪ್ರತಿಭೆಗಳಿಗೆ ಸಾಮೂಹಿಕ ಮತ್ತು ತನಿ ವಿಭಾಗಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮಂಡಿಸುವ ಅವಕಾಶ ಕಲ್ಪಿಸಲಾಗುವುದು.

ಸ್ವರ, ಲಯ, ತಾಳಗಳ ಸಮ್ಮಿಲನ,

ತರಲಿದೆ ಗಾನ ವೇದಿಕೆಗಳ  ಮಿಲನ.

ಕಲಾ  ಗಂಧರ್ವರ  ಪ್ರತಿಭೆಯ ಸಮ್ಮತಿಸುವ,

ಸಂಗೀತ ಜ್ಞ್ಯಾನ ಭಂಡಾರವನ್ನು ಅಭಿನಂದಿಸುವ.

ಬನ್ನಿ, ಈ ಸಂಗೀತ  ನಾವಿಕೆಯನ್ನೇರಿ, ನಾದಲಯಗಳಲ್ಲಿ  ತೇಲುವ,

ಸುಮಧುರ ಸಂಗೀತ ತಾಣದಲ್ಲಿ ವಿಹರಿಸುವ

Sangeeta Navika 2015, Carolina welcome you all music lovers to be a part of this Music event. Your participation and your presence in cultural event  will enhance the glory of  this Music Festival.  In these three days, you all  are going to witness, Classical – Semi Classical concerts, Bhaava Sangama, Bhakti Aaradhane, Kannada Film songs, are the main category of  Music programs for national and international participants.

In this forum Sangeeta Navika  will consider and give opportunity to the group music ensembles. For more information, please send an email to sangeeta@navika.org